ಸುಲಭವಾಗಿ ಕುಕ್ಕರ್ ಚಿಕನ್ ಬಿರಿಯಾನಿ ಮಾಡುವ ವಿಧಾನ:–

ಚಿಕನ್ ಬಿರಿಯಾನಿ ಮಾಡಲು ಮಾಡಲು ಹಲವಾರು ವಿಧಾನಗಳು ಇವೆ.ನಾವು ಇವತ್ತು ಕುಕ್ಕರ್ ನಲ್ಲಿ ಚಿಕನ್ ಬಿರಿಯಾನಿ ಮಾಡುವುದು ಹೇಗೆ ಎಂದು ನೋಡೋಣ..

ಕುಕ್ಕರ್ ಚಿಕ್ಕನ್ ಬಿರಿಯಾನಿಗೆ ಬೇಕಾಗುವ ಸಾಮಗ್ರಿಗಳು:-

1) ತುಪ್ಪ-3 ಚಮಚ

2) ಎಣ್ಣೆ-1 ಚಮಚ

3) ಸಹಜೀರ -1 ಚಮಚ , ಚಕ್ಕೆ-1, ಪಲಾವ್ ಎಲೆ-3, ಲವಂಗ-2, ಸ್ಟಾರ್-2, ಮರಾಠಿ ಮೊಗ್ಗು-3

4) ಹೆಚ್ಚಿಟ್ಟ ಈರುಳ್ಳಿ-1 ಮತ್ತು ಹಸಿರು ಮೆಣಸಿನಕಾಯಿ-1

5) ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ

6) ಹರಶಿಣ ಪುಡಿ -1 ಚಮಚ

7) ಉಪ್ಪು -2 ಚಮಚ

8) ಕಾರ-3 ಚಮಚ

9)ಗ್ರಾಂ ಮಸಾಲೆ -3 ಚಮಚ

10) ಮೊಸರು -ಅರ್ಧ ಕಪ್

11) ಪುದಿನಾ -1 ಮುಷ್ಟಿಯಷ್ಟು

12) ಕೊತ್ತಂಬರಿ ಸೊಪ್ಪು-1 ಮುಷ್ಟಿಯನ್ನು

13) ನಿಂಬೆ -ಅರ್ಧ

14) ಚಿಕನ್ -1 ಕೆ ಜಿ

15) ಬಾಸ್ಮತಿ ಅಕ್ಕಿ – 1 ವರೆ ಗ್ಲಾಸ್

=ಮೊದಲಿಗೆ ಗ್ಯಾಸ್ ಹಚ್ಚಿ ಒಂದು ಕುಕ್ಕರ್ನಲ್ಲಿ ಮೂರು ಚಮಚ ತುಪ್ಪ, ಮತ್ತು ತೆಗೆದುಕೊಂಡಂತಹ ಮಸಾಲೆ ಪದಾರ್ಥ ಗಳನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ನಂತರ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಸ್ಪೂನ್ ಹಾಕಿ ಸರಿಯಾಗಿ ಮಿಕ್ಸ್ ಮಾಡಬೇಕು.

ಮಿಕ್ಸ್ ಮಾಡಿದ ನಂತರ ಚಿಕನ್, ಅರಿಶಿಣ ಪುಡಿ, ಒಂದು ಚಮಚ ಉಪ್ಪು, ಖಾರದಪುಡಿ , ಗರಂ ಮಸಾಲೆ, ಬಿರಿಯಾನಿ ಮಸಾಲ ಮತ್ತು ಮೊಸರು ಮತ್ತು ಕೋತಂಬರಿ ಸೊಪ್ಪು ಮತ್ತು ದಿನ ಸೊಪ್ಪು ಸೇರಿಸಿದ ನಂತರ ಸರಿಯಾಗಿ ಐದು ನಿಮಿಷ ಮಿಕ್ಸ್ ಮಾಡಿ

ಒಂದುವರೆ ಗ್ಲಾಸ್ ನಷ್ಟು ತೊಳೆದ ಅಕ್ಕಿ ಮೂರುವರೆ ಗ್ಲಾಸ್ ನಷ್ಟು ನೀರು ಒಂದು ಚಮಚ ಅರ್ಧ ನಿಂಬೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಿಟ್ಟು ಎರಡು ವಿಶಲ್ ಕೂಗಿಸಿ ಕುಕ್ಕರ್ ತಣ್ಣಗಾದ ನಂತರ ರುಚಿ ರುಚಿಯಾದ ಕುಕ್ಕರ್ ಬಿರಿಯಾನಿ ತಯಾರಿ ಆಗಿದೆ….

ಬಿರಿಯಾನಿ ಮಾಡಲು ಹಲವಾರು ವಿಧಾನಗಳಿವೆ ಅವುಗಳಲ್ಲಿ ಮುಖ್ಯವಾದವು:-

*ಕುಕ್ಕರ್ ಬಿರಿಯಾನಿ

*ದಮ್ ಬಿರಿಯಾನಿ

*ನನ್ನ ಸ್ಟೈಲ್ ಬಿರಿಯಾನಿ

ಹೀಗೆ ಹಲವಾರು ಕಡೆ, ಹಲವಾರು ವಿಧಾನಗಳಿಂದ ಬಿರಿಯನಿಯನ್ನು ಮಾಡುತ್ತಾರೆ ಈ ಬಿರಿಯಾನಿ ತಿನ್ನುವುದರಿಂದ ನಮ್ಮ ದೇಹಕ್ಕೆ ಮುಖ್ಯವಾಗಿ ಸಿಕ್ಕುವ ಪೋಷಕಾಂಶಗಳು ಈ ಕೆಳಗಿನಂತೆವೆ

ಒಳ್ಳೆಯ ಕೊಬ್ಬು, ನಾರಿನಾಂಶ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಸ್..

ಚಿಕನ್:-ಚಿಕನ್ ತಿನ್ನೋದರಿಂದ ನಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ಮತ್ತು ಒಳ್ಳೆಯ ಪೋಷಕಾಂಶಗಳು ಚಿಕನ್ ಸಹಾಯ ಮಾಡುತ್ತದೆ ಇದರಿಂದ ಉತ್ತಮ ಕೊಬ್ಬು ಮತ್ತು ಪ್ರೋಟೀನ್ ಹೆಚ್ಚಾಗಿ ಸಿಗುತ್ತದೆ

ಪುತಿನ ಮತ್ತು ಕೊತ್ತಂಬರಿ:-ಈ ಸೊಪ್ಪಿನಿಂದ ಮೆಗ್ನೀಷಿಯಂ ಮತ್ತು ಐರನ್ ಸಿಗುತ್ತದೆ

ತುಪ್ಪ:-ಬಿರಿಯಾನಿಗೆ ಎರಡು ಸ್ಪೂನ್ ತುಪ್ಪ ಹಾಕುವುದರಿಂದ ಒಳ್ಳೆಯ ರುಚಿ ಕೊಡುತ್ತದೆ ಮತ್ತು ತುಪ್ಪ ಕೊಬ್ಬಿನಂಶವನ್ನು

ಬಿರಿಯಾನಿ ಎಲ್ಲಾ ಆ ಮದುವೆ ಹಾಗೂ ಮುಸ್ಲಿಮರ ಹಬ್ಬಗಳಲ್ಲಿ ಮಾಡುವ ವಿಶೇಷ ಆಹಾರ ಪದಾರ್ಥವಾಗಿದೆ . ಬಿರಿಯಾನಿ ಎಂದು ಸಿಗೋ ಪೋಷಕಾಂಶಗಳು ನಾವು ತಯಾರಿಸುವ ವಿಧಾನದ ಮೇಲೆ ನಿರ್ಧಾರವಾಗುತ್ತೆ.

#ಬಿರಿಯಾನಿ ಜೊತೆಗೆ ಸೈಡ್ಸ್ ಆಗಿ ಕೋಳಿ ಸುಕ್ಕ, ಮೊಸರು ಗೊಜ್ಜು, ಚಿಕನ್ ಕರಿ, ಕಬಾಬ್ ಮುಂತಾದ ಪದಾರ್ಥ ಜೊತೆಗೆ ತಿನ್ನುವುದರಿಂದ ಇನ್ನೂ ರುಚಿ ಸಿಗುತ್ತದೆ.


Comments

Leave a Reply

Your email address will not be published. Required fields are marked *